ಆಗಸದ ತುಂಬೆಲ್ಲಾ ಆತಂಕ
ಛಾವಣಿಗಾತುಕೊಂಡ ಬಾವಲಿ ದಂಡು
ಬಾಗಿಲ ಮುಖದಲ್ಲಿ
ಅರಳಿದ ನಗುವಿನ ಮೊಗ್ಗು
ಒಂದೇ ಕ್ಷಣ
ಬಾಡಿ ಬೆಂಡಾಯ್ತು
ಅಲ್ಲಾಡಿ ಹೋಯ್ತು ಅಳ್ಳೆ
ಕೊನೆಕೊನೆಗೆ…
ಹಸಿವಿನ ಕೇಕೆಯ ಹಸುಳೆಯ ಪ್ರಸವವಾಯ್ತು
ಕಣ್ಮರೆಸಿದ ನಾಚಿಕೆ ಆ ತುತ್ತಿಗೆ
ತನ್ನ ಕೈಯಾರೆ ತಿನ್ನಿಸಲಾಗದ್ದಕ್ಕೆ
ಇಲಿಯನ್ನೂ ಹುಲಿಯಾಗಿಸಬಲ್ಲ ತಾಕತ್ತು
ಯಕಶ್ಚಿತ್ ಹಸಿವಿಗಿದೆ
ವೀರನಾಗ್ಲಿ, ಕ್ರಾಂತಿಯಾಗ್ಲಿ ಹುಟ್ಟೋದು
ಹಸಿವಿನ ತವರು ಮನೆಯಲ್ಲೇ
ಹೊಟ್ಟೆ ಸಿಗಿದ್ಹೋಗುವಂತೆ ಅರಚಿದರೂ..
ಕನಿಕರವಿರದ ಲೋಕವಿದು
ತುತ್ತುದುರಿಸದ ವಸಂತವಿದು
ಹಸಿವಿಗನ್ನವನಿಕ್ಕಲಿಕ್ಕೇ ಆದಿಪುರುಷ ಆಯುಧ ಹಿಡಿದದ್ದು
ಧನಿಕನಾಗಲಿ, ದರಿದ್ರ ನಾಗಲಿ
ಹಸಿವಿನ ಹೆಬ್ಬಾಗಿಲ ಮುಂದೆ
ಭಿಕಾರಿಯೇ…
-ಬಸವರಾಜು ಕ್ಯಾಶವಾರ
-ಬಸವರಾಜು ಕ್ಯಾಶವಾರ
No comments:
Post a Comment